ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ
ಬಜಪೆ: ಅಟಲ್ ಟಿಂಕರಿಂಗ್ ಲ್ಯಾಬ್ ಲೋಕಾರ್ಪಣೆ
‘ಗ್ರಾಮೀಣ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ಆಗತ್ಯ’

ಪ್ರದಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಗ್ರಾಮೀಣ ಪ್ರತಿಭೆಗಳಿಗೆ ಪ್ರೋತ್ಸಾಹಕ್ಕೆ ಅಟಲ್ ಟಿಂಕರಿಂಗ್ ಲ್ಯಾಬ್ ಆರಂಭಿಸಲಾಗಿದೆ. ಇದರಿಂದ ಮಕ್ಕಳಲ್ಲಿ ಅನ್ವೇಷಣೆ ಮನೋಭಾವ ಬೆಳೆಯಲಿದ್ದು ವಿಜ್ಞಾನಿಗಳ ಸೃಷ್ಟಿಗೆ ಸಾಧ್ಯವಾಗಲಿದೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು. ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢಶಾಲೆಯಲ್ಲಿ ಭಾರತ ಸರಕಾರದ ನೀತಿ ಆಯೋಗದ ಅನುದಾನ 10 ಲಕ್ಷ ರೂ ಹಾಗೂ ಎಂಆರ್‍ಪಿಎಲ್‍ನ 21 ಲಕ್ಷ ರೂ. ವೆಚ್ಚದ ಸಹಕಾರದೊಂದಿಗೆ ಅಟಲ್ ಟಿಂಕರಿಂಗ್ ಲ್ಯಾಬ್‍ನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.


ಪ್ರತಿಯೊರ್ವ ವಿದ್ಯಾರ್ಥಿಗಳಲ್ಲಿ ವೈವಿಧ್ಯಮಯ ಪ್ರತಿಭೆ ಇರುತ್ತದೆ . ಇದಕ್ಕೆ ಪೂರಕವಾದ ಮಾರ್ಗದರ್ಶನ ನೀಡುವ ಅಗತ್ಯವಿದೆ. ಪ್ರತಿಭೆಗಳು ಅರಳಿ ದೇಶಕ್ಕೆ ಹಲವಾರು ವಿಜ್ಞಾನಿಗಳನ್ನು ಈ ಲ್ಯಾಬ್‍ನಿಂದ ನೀಡಲಿ ಎಂದು ಆಶಿಸಿದರು. ಕನ್ನಡ ಶಾಲೆಗಳ ಉಳಿವಿಗೆ ಶಿಕ್ಷಣ ಇಲಾಖೆಯವರಲ್ಲಿ ಚರ್ಚಿಸಿ, ಅದರ ಸಮಸ್ಯೆಗಳ ಪರಿಹಾರದ ಬಗ್ಗೆ ಕ್ರಮ ತೆಗೆದು ಕೊಳ್ಳಲಾಗುವುದು ಎಂದು ಶಾಸಕರು ಹೇಳಿದರು. ಮಂಗಳೂರಿನ ಬೆಥನಿ ವಿದ್ಯಾ ಸಂಸ್ಥೆಯ ಅಧ್ಯಕ್ಷೆ ವಂ| ಭ| ರೋಸ್ ಸೆಲಿನ್ ಅವರು ಅಧ್ಯಕ್ಷತೆ ವಹಿಸಿದ್ದರು. ಬಜಪೆ ಸೈಂಟ್ ಜೋಸೆಫ್ ಚರ್ಚ್‍ನ ಧರ್ಮಗುರು ವಂ| ರೊನಾಲ್ಡ್ ಕುಟಿನ್ಹೊ ಆಶೀರ್ವಚನ ನೀಡಿದರು.
