ಅನುದಾನಿತ ಹೋಲಿ ಫ್ಯಾಮಿಲಿ ಪ್ರೌಢ ಶಾಲೆ ಬಜಪೆ. ಇಲ್ಲಿನ ಶಾಲಾ ವಾರ್ಷಿಕೋತ್ಸವವನ್ನು ದಿನಾಂಕ 9-12-2019 ರಂದು ಬಹಳ ಅದ್ದೂರಿಯಿಂದ ಆಚರಿಸಲಾಯಿತು. ಆತಿಥಿಗಳಾಗಿ ಬೆಥನಿ ಸಂಸ್ಥೆಯ, ಮಂಗಳೂರು ಪ್ರಾಂತ್ಯದ ಪ್ಯಾಂತ್ಯಾಧಿಕಾರಿಣಿ ಹಾಗೂ ಕಾರ್ಪೊರೇಟ್ ಮ್ಯಾನೇಜರ್ ವಂ.ಭ . ಸಿಸಿಲಿಯಾ ಮೆಂಡೋನ್ಸಾ , ಬಜ್ಪೆಯ, ಚರ್ಚ್ ಪಾಲನಾ ಮಂಡಳಿ ಇದರ ಉಪಾಧ್ಯಕ್ಷ ರಾದ ಶ್ರೀ ಸಂತೋಷ್ ಡಿಸೋಜ ಇವರು ಹಾಗೂ ಶಾಲಾ ಸಂಚಾಲಕರಾದ ವಂ. ಭ ಮರಿಲೀಟಾ ಬಿ.ಎಸ್. ಇವರು ಉಪಸ್ಥಿತರಿದ್ದರು.
ಶ್ರೀ ಸಂತೋಷ್ ಡಿಸೋಜ ಇವರು, ತರಗತಿವಾರು, ಕಲಿಕೆಯಲ್ಲಿ ಆತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ, ಇಂದಿನ ಸ್ವರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಯಾವ ರೀತಿ ಬಾಳಬೇಕೆಂದು ಕಿವಿ ಮಾತುಗಳನ್ನು ನೀಡಿದರು.
ಅನಂತರ ಸಂಚಾಲಕರಾದ ವಂ.ಭ ಮಾರಿಲೀಟಾರವರು ಗಣಿತ ಹಾಗೂ ವಿಜ್ಞಾನ ವಿಷಯದಲ್ಲಿ ಅತ್ಯಧಿಕ ಅಂಕ ಗಳಿಸಿದವರಿಗೆ ಬಹುಮಾನ ವಿತರಿಸಿ. ಶಾಲೆ ಒಂದು ಕುಟುಂಬ . ಎಲ್ಲರೂ ಒಮ್ಮನಸ್ಸಿನಿಂದ ಕೂಡಿ ಬಾಳ ಬೇಕೆಂಬ ಸಂದೇಶ ನೀಡಿದರು.
ಅನಂತರ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುವ ವಂ. ಭ .ಸಿಸಿಲಿಯಾ ಮೆಂಡೋನ್ಸಾರವರು S.S.ಐ.ಅ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಹಾಗೂ ಖೋ ಖೋ ದಲ್ಲಿ ವಿಭಾಗ ಮಟ್ಟವನ್ನು ಪ್ರತಿನಿಧಿಸಿದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ, ಆಡಳಿತ ಮಂಡಳಿಯ ವತಿಯಿಂದ ಶುಭಾಶಯ ನೀಡಿ ಎಲ್ಲರನ್ನು ಅಭಿನಂದಿಸಿದರು .ಕಥೆಯ ಮೂಲಕ ವಿದ್ಯಾರ್ಥಿಗಳ ಮನ ಮುಟ್ಟುವಂತೆ ಪ್ರೇರಣೆ ನೀಡಿದರು.
ಶಾಲಾ ಮುಖ್ಯಸ್ಥೆ ವಂ. ಭ ಸಿಂತಿಯ ಡಿ’ಕುನ್ನಾರವರು ಸ್ವಾಗತಿಸಿ, ಶ್ರೀಮತಿ ಲಿಲ್ಲಿ ಮಿನೇಜಸ್ ಕಾರ್ಯಕ್ರಮವನ್ನು ನಿರೂಪಿಸಿ, ಶಿಕ್ಷಕರಾದ ಶ್ರೀಯುತ ವಾಸುದೇವ ರಾವ್ ವಂದಿಸಿದರು. ಬಳಿಕ ವಿವಿಧತೆಯಲ್ಲಿ ಏಕತೆ ಎಂಬ ಸಂದೇಶವನ್ನೊಳಗೊಂಡ ಸಾಂಸ್ಕ್ರತಿಕ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು ಈ ಕಾರ್ಯಕ್ರಮದಲ್ಲಿ ಹೆತ್ತವರು ಪೋಷಕರು ವಿದ್ಯಾಭಿಮಾನಿಗಳು ಹಿತೈಷಿಗಳು ಉಪಸ್ಥಿತರಿದ್ದರು.
Reported by
Sr Cynthia DCunha
Bajpe