ಬೆಥನಿ ಸಂಸ್ಥೆಯ ಮಂಗಳೂರು ಪ್ರಾಂತ್ಯದ ಪ್ರಾಂತ್ಯರ್ಧಿಕಾರಿಣಿ ವಂ.ಭ. ಡಾ. ಲಿಲ್ಲಿ ಪೀರೇರಾರವರು ದಿನಾಂಕ 04.02.2025 ಮಂಗಳವಾರದಂದು ನಮ್ಮ ಸಂಸ್ಥೆಗೆ ಅಧೀಕೃತ ಭೇಟಿನೀಡಿ, ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾವಿ ಶಿಕ್ಷಕರಾದ ನೀವು ಮುಗ್ಧ ಮಕ್ಕಳಲ್ಲಿ ಮೌಲ್ಯಾಧಾರಿತ, ಗುಣಮಟ್ಟದ ಶಿಕ್ಷಣವನ್ನು ನೀಡಿ ಮಕ್ಕಳ ಸರ್ವಾಂಗೀಣ ಬೇಳೆವಣಿಗೆಗೆ ಶ್ರಮಿಸಬೇಕೆಂದು ಕರೆನೀಡಿದರು.ಭೇಟಿಯ ವೇಳೆ ಮಂಗಳೂರು ಪ್ರಾಂತ್ಯದ ಪ್ರಾಂತೀಯ ಶಿಕ್ಷಣ ಸಂಯೋಜಕಿ ಹಾಗೂ ಪ್ರಾಂತ್ಯರ್ಧಿಕಾರಿಣಿಯವರ ಸಲಹೆಗಾರರು ವಂ.ಭ. ಡಾ.ಮಾರಿಯೋಲ ಬಿ.ಎಸ್. ರೋಸಾಮಿಸ್ತಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರು ವಂ.ಭ ರೋಸ್ ಲೀಟಾ ಮತ್ತು ವಂ.ಭ. ಲೀನಾ ಪಿರೇರಾ ಉಪಸ್ಥಿತರಿದ್ದರು. ನೆರೆದ ಸರ್ವರನ್ನು ಪ್ರಥಮ ವರ್ಷದ ಡಿ.ಇಲ್. ಇಡಿ ವಿದ್ಯಾರ್ಥಿ- ಶಿಕ್ಷಕಿ ಶ್ರೀಮತಿ ಬುಶ್ರಾ ಶಿಫಾರವರು ಸ್ವಾಗತಿಸಿದರು, ದ್ವಿತೀಯ ವರ್ಷದ ಡಿ.ಇಲ್. ಇಡಿ ವಿದ್ಯಾರ್ಥಿ- ಶಿಕ್ಷಕಿ ಶ್ರೀಮತಿ ವರ್ಷರವರು ವಂದನಾರ್ಪಣೆಗ್ಯೆದರು. ಶ್ರೀಮತಿ ಶಬರಿ ದ್ವಿತೀಯ ವರ್ಷದ ಡಿ.ಇಲ್. ಇಡಿ ವಿದ್ಯಾರ್ಥಿ- ಶಿಕ್ಷಕಿ ಕಾರ್ಯಕ್ರಮವನ್ನು ನಿರೂಪಿಸಿದರು.ತದನಂತರ ಸಂಸ್ಥೆಯ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರ ವೃಂದದೊಂದಿಗೆ ಸಮಾಲೋಚನೆ ನಡೆಸಿ ಸಂಸ್ಥೆಯ ಕಾರ್ಯವೈಖರಿ ಮತ್ತು ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಹಾಗೂ ಮಕ್ಕಳ ದಾಖಲಾತಿ ಹೆಚ್ಚುಸುವಲ್ಲಿ ಸಲಹೆ ಸೂಚನೆಯನ್ನು ನೀಡಿದರು.
ವರದಿ-ಶ್ರೀ. ರೋನಾಲ್ಡ್ ಕಾರ್ಲೊ, ಉಪನ್ಯಾಸಕರು, ರೋಸಾ ಮಿಸ್ತಿಕಾ ಶಿಕ್ಷಕಿ ತರಬೇತಿ ಸಂಸ್ಥೆ,ಕಿನ್ನಿಕಂಬಳ