ರೋಟರಿ ಕ್ಲಬ್ ಪುತ್ತೂರು , ಇಂಡಿಯನ್ ಡೆಂಟಲ್ ಎಸೋಸಿಯೇಶನ್ ಪುತ್ತೂರು , ಭಾರತೀಯ ರೆಡ್‍ಕ್ರಾಸ್ ಸಂಸ್ಥೆ , ಇನ್ನರ್ ವೀಲ್‍ಕ್ಲಬ್ ಪುತ್ತೂರು ಇವರ ಸಹಯೋಗದೊಂದಿಗೆ ದಿನಾಂಕ 05.10.2015 ರಂದು ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ದರ್ಬೆ ಪುತ್ತೂರು ಇಲ್ಲಿನ ವಿದ್ಯಾರ್ಥಿಗಳಿಗೆ ದಂತ ತಪಾಸಣಾ ಶಿಬಿರ ಹಾಗೂ ದಮತ ರಕ್ಷಣಾ ಮಾಹಿತಿ ಕಾರ್ಯಕ್ರಮವನ್ನು ಶಾಲಾ ಮ್ಯಾನೇಜರ್ ಸಿಸ್ಟರ್ ಲೋಯ್‍ಲೀನ್‍ರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಉಪಸ್ಥಿತರಿದ್ದ ಸರ್ವರನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲಿಲ್ಲಿ ಡಿಸೋಜ ಸ್ವಾಗತಿಸಿ , ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ಮೇರಿ ಡಿ’ಸಿಲ್ವ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮ್ಯಾನೇಜರ್ ಸಿಸ್ಟರ್ ಲೋಯ್‍ಲೀನ್ , ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶ್ರೀಯುತ ಶಂಕರನಾರಾಯಣ ಭಟ್, ಇನ್ನರ್ ವೀಲ್‍ಕ್ಲಬ್ ಸದಸ್ಯೆ ಶ್ರೀಮತಿ ಪುಷ್ಪಾ ಕೆ.ಪಿ ಶೆಟ್ಟಿ, ನಮ್ಮ ಶಾಲಾ ಹಿರಿಯ ವಿದ್ಯಾರ್ಥಿಗಳಾದ ಡಾ . ಪೂಜಾ , ಡಾ. ಶ್ರೀಪ್ರಕಾಶ್ ನಿರ್ದೇಶಕರು , ಸಮುದಾಯ ಸೇವಾ ವಿಭಾಗ , ರೋಟರಿಕ್ಲಬ್ ಪುತ್ತೂರು . ಡಾ. ಆ ಡ್ರಿ ಮುಖ್ಯಸ್ಥರು ಸಮುದಾಯ ದಂತ ಆರೋಗ್ಯ ವಿಭಾಗ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯ ದೇರಳಕಟ್ಟೆ ಶ್ರೀಯುತ ಆಸ್ಕರ್ ಆನಂದ್ ಸಧ್ಯಕ್ಷರು ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಶ್ರೀಯುತ ಜಗ್‍ಜೀವನ್ ದಾಸ್ ರೈ ಸದಸ್ಯರು ಜೆ.ಸಿ.ಐ . ಪುತ್ತೂರು ಹಾಗೂ ಎ.ಬಿ ಶೆಟ್ಟಿ ದಂತ ಮಹಾವಿದ್ಯಾಲಯದ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಡಾ. ಶ್ರೀ ಪ್ರಕಾಶ್ ಪ್ರಸ್ತಾವಿಕ ಮಾತುಗಳನ್ನಾಡಿದರು. ನಂತರ ಡಾ ಆಡ್ರಿರವರು ಪ್ರೊಜೆಕ್ಟರ್ ಮೂಲಕ ದಂತ ಆರೋಗ್ಯದ ಕುರಿತು ಚಿತ್ರಸಹಿತ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು. ಅಂತಿಮವಾಗಿ ನಮ್ಮ ಶಾಲಾ ವಿದ್ಯಾರ್ಥಿಗಳಿಗೆ ದಂತ ಚಿಕಿತ್ಸೆ ನೀಡಲಾಯಿತು.
Reported by
Sr Lilly D’Souza Bs
Headmistress