ಯೋಗಾಸನ ಸ್ಪರ್ಧೆ ಜಿಲ್ಲಾ ಮಟ್ಟಕ್ಕೆ ಆಯ್ಕೆ
ಸಾರ್ವಜನಿಕ ಶಿಕ್ಷಣಾ ಇಲಾಖಾವತಿಯಿಂದ ಸರಕಾರಿ ಪ್ರೌಢಶಾಲೆ ಬೊಕ್ಕಪಟ್ಣ ಮಂಗಳೂರು ಇಲ್ಲಿ ದಿನಾಂಕ 07-09-2015ರಂದು ನಡೆದ ಮಂಗಳೂರು ತಾಲೂಕು ಉತ್ತರ ವಲಯ ಯೋಗಾಸನ ಸ್ಪರ್ದೆಯಲ್ಲಿ ಬಾಲಕಿಯರ ವಿಭಾಗದಲ್ಲಿ ಲಿಟ್ಲ್ ಫ್ಲವರ್ ಪ್ರೌಢಶಾಲೆ, ಕಿನ್ನಿಗೋಳಿ ಸಮಗ್ರ ಪ್ರಶಸ್ತಿಯನ್ನು ಪಡೆದಿರುತ್ತದೆ. ಅಲ್ಲದೆ ಈ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದ ಕುಮಾರಿ ಆದ್ಯಿಷ 9ನೇ ತರಗತಿ ಹಾಗೂ ತೃತಿಯ ಸ್ಥಾನ ಪದೆದ ಕುಮಾರಿ ದಿವ್ಯಶ್ರೀ 9ನೇ ತರಗತಿ ಇವರು ದಿನಾಂಕ 12-09-2015ರಂದು ಸರೊಜಿನಿ ಮಧುಸೂಧನ ಕುಶೆ ಅತ್ತಾವರ ಮಂಗಳೂರು ಇಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ದೆಯಲ್ಲಿ ಭಾಗವಹಿಸಿರುತ್ತಾರೆ.
ಯೋಗಾಸನ ಸ್ಪರ್ಧೆ ವಿಭಾಗೀಯ ಮಟ್ಟಕ್ಕೆ ಆಯ್ಕೆ
ಸಾರ್ವಜನಿಕ ಶಿಕ್ಷಣಾ ಇಲಾಖಾವತಿಯಿಂದ ಸÀರೊಜಿನಿ ಮಧುಸೂಧನ ಕುಶೆ ಅತ್ತಾವರ ಮಂಗಳೂರು ಇಲ್ಲಿ ದಿನಾಂಕ 12-09-2015ರಂದು ನಡೆದ ಜಿಲ್ಲಾ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಮಂಗಳೂರು ಉತ್ತರ ವಲಯ ಸಮಗ್ರ ಪ್ರಶಸ್ತಿ ಪಡೆದ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆ ಕಿನ್ನಿಗೋಳಿಯ ವಿದ್ಯರ್ಥಿನಿಯರಾದ ಮೋಕ್ಷಾ ಎನ್. ಅಮೀನ್ ಹರ್ಷಿತಾ. ಎ, ಹರ್ಷಿತಾ, ಅ0ಜಲಿ ಇವರು ಪ್ರತಿನಿಧಿಸಿದರು, ಇವರಲ್ಲಿ ಮೋಕ್ಷಾ ಎನ್. ಅಮೀನ್ 6ನೇ ತರಗತಿ ಇವಳು ಪ್ರಶಸ್ತಿಯನ್ನು ಪಡೆದು ಮೈಸೂರಿನಲ್ಲಿ ನಡೆಯುವ ವಿಭಾಗೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾಳೆ.
ಇನ್‍ಸ್ಪೈರ ಅವಾರ್ಡ್
ಲಿಟ್ಲ್ ಫ್ಲವರ್ ಪ್ರೌಢಶಾಲೆ ಕಿನ್ನಿಗೋಳಿ, ಮಂಗಳೂರು ಇಲ್ಲಿಯ 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿನಿಯರಾದ ಕುಮಾರಿ ಶ್ರುತಿಕಾ (ಮಾದರಿ - ಅಪಘಾತ ಸೆನ್ಸರ್ ಸಾಧನ) ಹಾಗೂ ಕುಮಾರಿ ರೆನಿಷಾ ಡಿಸೋಜ (ಮಾದರಿ - ಸ್ಮಾರ್ಟ್ ಹ್ಯಾಂಗರ್) ಇವರು 13-08-2015 ರಿಂದ 14-08-2015ರವರೆಗೆ ಕೆನರಾ ಪ್ರೌಢ ಶಾಲೆ, ಉರ್ವ ಮಂಗಳೂರು ಉತ್ತರ ಇಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಇನ್‍ಸ್ಪೈರ್ ಅವಾರ್ಡ್ ವಿಜ್ಞಾನ ಮಾದರಿ ಮತ್ತು ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಲು ಆಯ್ಕೆಯಾಗಿರುತ್ತಾರೆ.
ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿದ ಉಪನಿರ್ದೇಶಕರಾದ ಶ್ರೀ ವಾಲ್ಟರ್ ಹೆಚ್. ಡಿಮೆಲ್ಲೊ ಇವರು ವಿಜೇತರಾದ ದಕ್ಷಿಣ ಹಾಗೂ ಉಡುಪಿ ಜಿಲ್ಲೆಗಳ ಎಲ್ಲಾ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಅಭಿನಂದನೆಯನ್ನು ಸಲ್ಲಿಸಿದರು ಹಾಗೂ ‘ಇಂತಹ ಮಾದರಿಗಳು ನಿಮ್ಮ ಭವಿಷ್ಯದ ಶಿಕ್ಷಣಕ್ಕೆ ಪ್ರೇರಣೆಯಾಗಲಿ’ ಎಂದು ಹೇಳಿದರು. ಮಾತ್ರವಲ್ಲ ವಿಜ್ಞಾನಿಗಳಾಗಲು ಆಶಾಕಿರಣ ನಿಮ್ಮಲ್ಲಿ ಮೂಡಿಬರಲಿ ಎಂದು ಹರಸಿದರು.
Reported by
Headmistress