ಫುಟ್‌ಬಾಲ್ (Football)
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಫುಟ್‌ಬಾಲ್ ಪಂದ್ಯಾಟದಲ್ಲಿ 17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲಾ ವಿದ್ಯಾರ್ಥಿನಿಯರು ಜಿಲ್ಲೆ, ವಿಭಾಗ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಪೂನಾದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಅಪೂರ್ವ ಶಟ್ಟಿ, ಹರ್ಷಿತ, ಕ್ರಿಸ್ಟ್ಲನ್ ಪಿಂಟೊ, ಶಬ್ನಮ್ ಪರ್ವೀನ್, ಡಿಯೋನಾ ಡಿ’ಸೋಜ, ದೀಕ್ಷಾ ಸರಿಪಲ್ಲ, ಇವರು ಮುಖ್ಯೋಪಾಧ್ಯಾಯಿನಿ ಸಿ. ಸಿಸಿಲಿಯಾ ಮೆಂಡೋನ್ಸಾ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಫ್ಲಾವಿಯಾ ಪಾಸ್ ಹಾಗೂ ತರಬೇತುದಾರ ಶ್ರೀ ಜಾನ್ ಡಿ’ಸೋಜ ಇವರೊಂದಿಗೆ.
ತಂಡ ಪ್ರಶಸ್ತಿ (Team Championship)
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕ್ರೀಡಾಕೂಟದಲ್ಲಿ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲಾ ವಿದ್ಯಾರ್ಥಿಗಳು ಕ್ಲಸ್ಟರ್ ಹಾಗೂ ಮಂಗಳೂರು ದಕ್ಷಿಣ ವಲಯದಲ್ಲಿ 14ರ ವಯೋಮಿತಿಯ ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿರುತ್ತಾರೆ. ಅಭಿಷೇಕ್ ಸಿಕ್ವೇರ 2೦೦ಮೀ ಓಟದಲ್ಲಿ ಪ್ರಥಮ, ಉದ್ದ ಜಿಗಿತ ಹಾಗೂ 1೦೦ಮೀ ಓಟದಲ್ಲಿ ದ್ವಿತೀಯ ಹಾಗೂ ವೈಯಕ್ತಿಕ ಪ್ರಶಸ್ತಿ ಪಡೆದಿರುತ್ತಾನೆ. ರಿಕಿಶಿ ಅಲೆಕ್ಸ್ ಡಿ’ಸಿಲ್ವ ಹರ್ಡಲ್ಸ್ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ರಿಲೇ ತಂಡ ಪ್ರಥಮ ಸ್ಥಾನ, ದರ್ಶಿತ ಕೆ. 1೦೦ಮೀ ಓಟದಲ್ಲಿ ಹಾಗೂ ಉದ್ದ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾಳೆ. ಡಿಯೋನ ಡಿ’ಸೋಜ 2೦೦ಮೀ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ತಂಡವು ಮುಖ್ಯೋಪಾಧ್ಯಾಯಿನಿ ಸಿ. ಸಿಸಿಲಿಯಾ ಮೆಂಡೋನ್ಸಾ, ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಫ್ಲಾವಿಯಾ ಪಾಸ್ ಇವರೊಂದಿಗೆ.
ಎತ್ತರ ಜಿಗಿತ (High Jump)
ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಕ್ರೀಡಾಕೂಟದಲ್ಲಿ ಕುಲಶೇಖರದ ಸೇಕ್ರೆಡ್ ಹಾರ್ಟ್ಸ್ ಪ್ರೌಢಶಾಲಾ ವಿದ್ಯಾರ್ಥಿಯಾದ ರಿಕಿಶಿ ಅಲೆಕ್ಸ್ ಡಿ’ಸಿಲ್ವ 14ರ ವಯೋಮಿತಿಯ ವಿಭಾಗದಲ್ಲಿ ಹಾಸನದಲ್ಲಿ ನಡೆದ ರಾಜ್ಯಮಟ್ಟದಲ್ಲಿ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಂಚಿಯಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಮುಖ್ಯೋಪಾಧ್ಯಾಯಿನಿ ಸಿ. ಸಿಸಿಲಿಯಾ ಮೆಂಡೋನ್ಸಾ ಇವರ ಪ್ರೋತ್ಸಾಹ ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಫ್ಲಾವಿಯಾ ಪಾಸ್ ಹಾಗೂ ಮಿಲಾಗ್ರಿಸ್ ಪ್ರೌಢಶಾಲೆಯ ಬಾಲಕೃಷ್ಣ ಇವರಲ್ಲಿ ತರಬೇತಿ ಪಡೆದುಕೊಂಡಿರುತ್ತಾನೆ.