“ಯಾವ ಸಿ.ಬಿ.ಎಸ್.ಸಿ ಶಾಲೆಗೂ ಕಡಿಮೆ ಇಲ್ಲ ನಮ್ಮ ಸೇಕ್ರೆಡ್ ಹಾಟ್ರ್ಸ್ ಪ್ರೌಢಶಾಲೆ” ಶ್ರೀಯುತ ಜಾರ್ಜ್ ಪಿಂಟೊ
ವಿದ್ಯಾರ್ಥಿಗಳ ಪ್ರತಿಭೆಗಳು ಹೊರಹೊಮ್ಮುವಲ್ಲಿ ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕರ ಪಾತ್ರ ಮಹತ್ತರವಾದುದು. ಎಲ್ಲಾ ಹೆತ್ತವರು ತಮ್ಮ ಮಕ್ಕಳ ಬಗ್ಗೆ ಕಾಳಜಿಯನ್ನು ವಹಿಸಬೇಕು ವಿಶೇಷವಾಗಿ ಮೊಬೈಲ್‍ನ ದುರ್ಬಳಕೆಗೆ ಒಳಗಾಗದಂತೆ ಜಾಗರೂಕರಾಗಿರಬೇಕು. ಅನೇಕ ವಿದ್ಯಾರ್ಥಿಗಳು ಕಿರಿಯ ವಯಸ್ಸಿನಲ್ಲಿಯೇ ಮಾದಕ ದ್ರವ್ಯ ವ್ಯಸನಿಗಳಾಗುತ್ತಿದ್ದು, ಹೆತ್ತವರು ಇದರ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕು. ಎಷ್ಟೇ ಕೆಲಸದ ಒತ್ತಡದ ನಡುವೆಯೂ ಮಕ್ಕಳಿಗೋಸ್ಕರ ದಿನಕ್ಕೆ ಒಂದು ಗಂಟೆಯಾದರೂ ಮೀಸಲಿಡಬೇಕು. ತಮ್ಮ ಮಕ್ಕಳ ಕಲಿಕಾ ಪ್ರಗತಿಯನ್ನು ವಿಶ್ಲೇಷಿಸಲು ತಿಂಗಳಿಗೆ ಒಮ್ಮೆಯಾದರೂ ಶಾಲೆಗೆ ಭೇಟಿ ನೀಡಬೇಕು ಎಂದು ಅವರು ಕುಲಶೇಖರದ ಸೇಕ್ರೆಡ್ ಹಾಟ್ರ್ಸ್ ಫ್ರೌಢಶಾಲಾ ವಾರ್ಷಿಕ ಬಹುಮಾನ ವಿತರಣಾ ಸಂದರ್ಭದಲ್ಲಿ ಮುಖ್ಯಅತಿಥಿಯಾಗಿ ನುಡಿದರು. ಶಾಲಾ ಸಂಚಾಲಕಿ ವಂ.ಭ. ಸಿಬಿಲ್ ಬಿ.ಎಸ್. ಸ್ವಾಗತಿಸಿದರು. ವೇದಿಕೆಯಲ್ಲಿ ರಕ್ಷಕ - ಶಿಕ್ಷಕ ಸಂಘದ ಉಪಾಧ್ಯಕ್ಷ ಶ್ರೀ ಜಾರ್ಜ್ ಡಿ’ಸೋಜ, ಶಾಲಾ ಪ್ರಾಕ್ತನ ವಿದ್ಯಾರ್ಥಿ ಸಂಘದ ಉಪಾಧ್ಯಾಕ್ಷ ಶ್ರೀ ಸ್ಟೀಫನ್ ಕುಟಿನ್ಹೊ, ಸೇಕ್ರೆಡ್ ಹಾಟ್ರ್ಸ್ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ವಂ.ಭ. ಜೆಸ್ಸಿ ಲೀನಾ ಹಾಗೂ ಶಾಲಾ ನಾಯಕಿ ಕುಮಾರಿ ಓಲಿನ್ ನೈನಾ ಡಿ’ಸೋಜ ಉಪಸ್ಥಿತರಿದ್ದರು. ಮಂಗಳೂರು ಪ್ರಾಂತ್ಯದ ಪ್ರಾಂತ್ಯಾಧಿಕಾರಿಣಿಯವರ ಆಪ್ತ ಸಲಹೆಗಾರರಾದ ವಂ.ಭ. ಶುಭಾ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ವಂ.ಭ. ಸಿಂತಿಯಾ ಡಿ’ಕುನ್ಹ ವಂದಿಸಿದರು. ಶಿಕ್ಷಕಿಯರಾದ ಶಮೀಲಾ ಫೆರ್ನಾಂಡಿಸ್ ಹಾಗೂ ಶಿಲ್ಪಾ ಲೋಬೊ ನಿರೂಪಿಸದರು.
ವಂ.ಭ. ಸಿಂತಿಯಾ ಡಿ’ಕುನ್ಹ