ದಿನಾಂಕ 28-06-2017 ರಂದು ಸಂತ ರೇಮಂಡರ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಮಂತ್ರಿ ಮಂಡಲ ಮತ್ತು ವಿವಿಧ ಸಂಘಟನೆಗಳನ್ನು ಉದ್ಘಾಟಿಸಲಾಯಿತು. ಶಾಲಾ ನಾಯಕಿಯಾಗಿ ಕುಮಾರಿ ಮೇಘಶ್ರೀ ಹಾಗೂ ಉಪನಾಯಕಿಯಾಗಿ ಕುಮಾರಿ ಶರ್ಲಿನ್ ಶ್ವೇತಾ ಡಿ’ಕುನ್ಹ ರವರು ಆಯ್ಕೆಯಾಗಿದ್ದು, ಶಾಲಾ ಮುಖ್ಯೋಪಾಧ್ಯಾಯಿನಿ ವಂದನೀಯ ಭಗಿನಿ ರೀಟಾ ಶರಲ್ ರವರು ಆಯ್ಕೆಯಾದ ಪದಧಿಕಾರಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿ ಅವರ ಮುಂದಿನ ಎಲ್ಲಾ ಜವಾಬ್ದಾರಿಗಳಿಗೆ ಶುಭ ಹಾರೈಸಿದರು. 7ನೇ ತರಗತಿ ವಿದ್ಯಾರ್ಥಿ ಮೆಲ್ರಿಕ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು. ವಿಯಾನ್ ವಂದಿಸಿದರು.
ಭಗಿನಿ ರೀಟಾ ಶರಲ್