ಅಮೃತ ಮಹೋತ್ಸವದ ಹೊಸ್ತಿಲಿನಲ್ಲಿರುವ  ಶಾಲೆಯು ದಿನಾಂಕ 14.10.2015ರಂದು ಶಾಲಾ ಅಮೃತ ಮಹೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಅತಿಥಿಗಣ್ಯರನ್ನು ಪೂರ್ಣಕುಂಭದ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಯಿತು. ಶಾಲಾ ಪ್ರಥಮ ವರ್ಷದ ಪ್ರಥಮ ಬ್ಯಾಚಿನ ವಿದ್ಯಾರ್ಥಿನಿ ವಂ| ಭ| ಮೆಡೆಲ್ಲಾರವರು ಶಾಲಾ ಸಂಸ್ಥಾಪಕರಾದ ಆರ್.ಎಫ್.ಸಿ. ಮಸ್ಕರೇನ್ಹಸ್‍ರವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಜ್ಯೋತಿ ಬೆಳಗಿಸಿ ನಂತರ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮುಖ್ಯೋಪಾಧ್ಯಾಯಿನಿ ಭಗಿನಿ ಲೀರಾ ಮರಿಯ ಹಾಗೂ ಪ್ರಸಕ್ತ ಸಾಲಿನ 8ನೇ ತರಗತಿ  ವಿದ್ಯಾರ್ಥಿನಿ ಕುಮಾರಿ ಶಿಬಾಲಿ ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು.

ಶಾಲಾ ಅಮೃತ ಮಹೋತ್ಸವದ ಉದ್ಘಾಟನೆಯ ಕಾರ್ಯಕ್ರಮವು ವಿನೂತನವಾಗಿದ್ದುದು ಒಂದು ವಿಷೇಶವಾಗಿತ್ತು. ಅತಿ ಹಿರಿಯ ವಿದ್ಯಾರ್ಥಿನಿ ವಂ| ಭ| ಮೆಡೆಲ್ಲಾರವರು ಹಾಗೂ ಅತಿ ಕಿರಿಯ ವಿದ್ಯಾರ್ಥಿನಿ ಕುಮಾರಿ ಶಿಬಾಲಿಯವರೊಂದಿಗೆ ಒಟ್ಟು 75 ಹಳೆ ವಿದ್ಯಾರ್ಥಿಗಳು ಜ್ಯೋತಿ ಬೆಳಗಿಸಿ ಕಾರ್ಯಕ್ರಮದ ಸೊಭಗನ್ನು ಇಮ್ಮಡಿ ಗೊಳಿಸಿದರು. ತದನಂತರ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷೆ ವಂ| ಭ| ಮಾರಿಯೆಟ್‍ರವರ ಸಾಂಕೇತಿಕ ದೀಪಾಲಂಕೃತ ಫಲಕಕ್ಕೆ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಅಧ್ಯಕ್ಷ ಸ್ಥಾನ ವಹಿಸಿದ ಮಂಗಳೂರಿನ ಬೆಥನಿ ವಿದ್ಯಾ ಸಂಸ್ಥೆಯ ಪ್ರಾಂತ್ಯಾಧಿಕಾರಿಣಿ ಹಾಗೂ ಕಾರ್ಪೊರೇಟ್ ಮ್ಯಾನೇಜರ್ ವಂ| ಭ| ಮಾರಿಯೆಟ್ ಬಿ ಎಸ್., ಆಶೀರ್ವಚನ ನೀಡಲು ಆಗಮಿಸಿದ ಕಿನ್ನಿಗೋಳಿ ಚರ್ಚ್‍ನ ಧರ್ಮಗುರುಗಳಾದ ವಂ| ಗು| ವಿನ್ಸೆಂಟ್ ಮೊಂತೇರೊ, ಸಂಸ್ಥಾಪಕರಿಗೆ ನುಡಿನಮನ ಸಲ್ಲಿಸಲು ಲಿಟ್ಲ್ ಫ್ಲವರ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯೆ ವಂ| ಭ| ಡಿವೀನಾರವರು, ಮುಖ್ಯ ಅತಿಥಿಯಾಗಿ ಮೇರಿವೆಲ್ ಕಾನ್ವೆಂಟಿನ  ಮುಖ್ಯಸ್ಥೆ ವಂ| ಭ| ವಿತಾಲಿಸ್ ಅಥಿತಿಗಳಾಗಿ ಹಳೆ ವಿದ್ಯಾರ್ಥಿಗಳಾದ ಶ್ರೀಮತಿ ಜೆಸಿಂತ ಮಥಾಯಸ್, ಶ್ರೀಮತಿ ಕೆ.ಪದ್ಮಾಕ್ಷಿ, ಶ್ರೀ ಗಣೇಶ್ ಕುಂದರ್, ಶ್ರೀಮತಿ ಸರೋಜಿನಿ ಮತ್ತು ಶ್ರೀ ಭುವನಾಭಿರಾಮ ಉಡುಪ ಶ್ರೀಮತಿ ಶೈಲಾ ಸಿಕ್ವೇರಾ ( ಹಳೆ ವಿ. ಸಂಘ – ಉಪಾಧ್ಯಕ್ಷೆ), ಶ್ರೀ ರಮೇಶ್ ದೇವಾಡಿಗ (ಶಿ. ರ. ಸಂಘ – ಉಪಾಧ್ಯಕ್ಷ) ಶಾಲಾ ಸಂಚಾಲಕಿ ವ| ಭ| ಸಿಬಿಲ್ ರವರು ಉಪಸ್ಥಿತರಿದ್ದರು.

Reported by

Sr Leera Maria BS

Headmistress, Little Flower High School, Kinnigoli

Contact Us

Bethany Provincialate
Vamanjoor, Mangalore, 575028
Karnataka, India.

Email : This email address is being protected from spambots. You need JavaScript enabled to view it. 

Phone : 0824 2262105