ಸೈಂಟ್ ರೆಮಂಡ್ ಪದವಿ ಕಾಲೇಜು ವಾಮಂಜೂರು ಇದರ ರಾಷ್ಟ್ರೀಯ ಸೇವಾ ಯೋಜನಾ ಘಟಕ ಇದರ ವಾರ್ಷಿಕ ವಿಶೇಷ ಶಿಬಿರ ವು ಸರ್ಕಾರಿ ಪ್ರೌಢಶಾಲೆ ಹೊಸಬೆಟ್ಟು ಮೂಡಬಿದಿರೆ ಇಲ್ಲಿ ನವೆಂಬರ್ 21ರಿಂದ ಆರಂಭಗೊಂಡು ನವೆಂಬರ್ 27ಕ್ಕೆ ಸಮಾಪನಗೊಂಡಿತು.
ಶಿಬಿರವನ್ನು ಲಯನ್ಸ್ ಕ್ಲಬ್ ತುಳುನಾಡು ಇದರ ಅಧ್ಯಕ್ಷ ಪಿಎಂಜೆಎಫ್ ಎಂ.ಎಂ.ಪಿರೇರಾ ಉದ್ಘಾಟಿಸಿದರು. ಶಿಬಿರದ ಧ್ವಜಾರೋಹಣ ನೆರವೇರಿಸಿ ಉದ್ಘಾಟಿಸಿದ ಅವರು ಮಾತನಾಡಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿ ದೇಶ ಸೇವೆ ಮಾಡಿ ತಮ್ಮ ಕ್ರಿಯಾಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಡಿ.317 ಡಿ ಇದರ ಕಾರ್ಯದರ್ಶಿ ಲಯನ್ ಎಂಜೆಎಫ್ ಕುಡ್ಪಿ ಅರವಿಂದ ಶೆಣೈ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೈಂಟ್ ರೇಮಂಡ್ ಕಾಲೇಜಿನ ಪ್ರಿನ್ಸಿಪಾಲ್ ಭ.ಸಗಯಾ ಸೆಲ್ವಿ ,ಸರ್ಕಾರಿ ಪ್ರೌಢಶಾಲೆ ಹೊಸಬೆಟ್ಟು ಇದರ ಮುಖ್ಯೋಪಾಧ್ಯಾಯ ಸುಭಾಷ್ಚಂದ್ರ , ಮುಲ್ಕಿ ಕಾಂಗ್ರೆಸ್ ಇದರ ಅಧ್ಯಕ್ಷ ಚಂದ್ರಹಾಸ ಸಾಧು ಸನಿಲ್, ತಾಲೂಕು ಪಂಚಾಯತ್‍ನ ಸಾಮಾಜಿಕ ನ್ಯಾಯ ಸಮಿತಿಯ ಅಧ್ಯಕ್ಷೆ ರೀಟಾ ಕುಟಿನ್ಹಾ , ಜೆಡಿಎಸ್ ನಾಯಕ ಅಶ್ವಿನ್ ಪಿರೇರಾ, ಕೊನ್ನೆಪದವು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಶಿವಯ್ಯ , ಹೊಸಬೆಟ್ಟು ಗ್ರಾಮಪಂಚಾಯತ್ ಸದಸ್ಯ ಮೈಕಲ್ ನೊರೊನ್ಹಾ , ಗ್ರಾಮಪಂಚಾಯತ್ ಅಧ್ಯಕ್ಷ ಮನೋಜ್ ಅಲ್ವಾರೀಸ್ , ಪದ್ಮಪ್ರಸಾದ್ ಜೈನ್ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಸಮಾರೋಪ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕ ಸರಕಾರದ ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಯುವಜನಾ ಸೇವಾ ಇಲಾಖೆಯಿಂದ ರಾಷ್ಟ್ರೀಯ ಸೇವಾ ಯೋಜನಾ ಚಟುವಟಿಕೆಗಳಿಗೆ ಹೆಚ್ಚು ಹಣ ವಿನಿಯೋಗಿಸಲಾಗಿದೆ ಎಂದರು.ಶಿಬಿರದಲ್ಲಿ ವಿದ್ಯಾರ್ಥಿಗಳು ಹೊಸಬೆಟ್ಟು ಗ್ರಾಮದ ಸಮಗ್ರ ಸಮೀಕ್ಷೆ ಕೈಗೊಂಡರು. ಶಿಬಿರಾಧಿಕಾರಿ ಡೊಂಬಯ್ಯ ಇಡ್ಕಿದು ಶಿಬಿರದ ಸಮಗ್ರ ನಿರ್ವಹಣೆ ಮಾಡಿದರು. ಅಲ್ಲದೆ ಬೀದಿನಾಟಕ ತರಬೇತಿ ,ಉಚಿತ ವೈದ್ಯಕೀಯ ತರಬೇತಿ ,ಕಾನೂನು ತರಬೇತಿ ಮತ್ತು ಸಂವಹನ ತರಗತಿಗಳನ್ನು ನಡೆಸಲಾಯಿತು.ಶಿಬಿರದಲ್ಲಿ ಸಕ್ರಿಯವಾಗಿ ಸಹಕಾರ ನೀಡಿದ ಗಣ್ಯರಾದ ಲಯನ್ಸ್ ಕ್ಲಬ್ ತುಳುನಾಡು ಇದರ ಅಧ್ಯಕ್ಷ ಪಿಎಂಜೆಎಫ್ ಎಂ.ಎಂ.ಪಿರೇರಾ, ಹೊಸಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷ ಮನೋಜ್ ಅಲ್ವಾರೀಸ್ ,ಲಯನ್ಸ್ ಕ್ಲಬ್ ನ ಡಯನ್ ಲುವಿಸ್ , ಶಿಬಿರಾಧಿಕಾರಿ ಡೊಂಬಯ್ಯ ಇಡ್ಕಿದು ಇವರನ್ನು ಸನ್ಮಾನಿಸಲಾಯಿತು.