ಶಿಕ್ಷಣ ಕ್ಷೇತ್ರದಲ್ಲಿ 40 ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಶಿಕ್ಷಕಿಯಾಗಿ, ಮುಖ್ಯ ಶಿP್ಪ್ಷಕಿಯಾಗಿ ನಿಸ್ವಾರ್ಥ ಸೇವೆಗೈದು ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತರಾದ ವಂ.ಭ| ಅರುಣಾ ಬಿ.ಎಸ್. ರವರ ವಿದಾಯ ಸನ್ಮಾನ ಸಮಾರಂಭವು ದಿನಾಂಕ 02.06.2016 ರಂದು ಶಾಲಾ ಸಭಾ ಭವನದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕಿ ವಂ.ಭ| ಡಿವೀನಾ ಬಿ.ಎಸ್. ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಲಿಟ್ಲ್ ಫ್ಲವರ್ ದರ್ಬೆ ಪುತ್ತೂರಿನ ನಿವ್ರತ್ತ ಶಿಕ್ಷಕರಾದ ಶ್ರೀ ಕೆ.ಪಿ.ಜೋಸೆಫ್ ರವರು ಆಗಮಿಸಿದ್ದರು. ಶಾಲಾ ನಿಕಟ ಪೂರ್ವ ಸಂಚಾಲಕಿ ವಂ ಭ| ಸಿಬಿಲ್ ಬಿ.ಎಸ್., ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶ್ರೀಮತಿ ಸಿಂತಿಯಾ ಡಿಸೋಜ, ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ, ಹಳೆ ವಿದ್ಯಾರ್ಥಿ ವೃಂದ, ಶಾಲಾ ಹಿತೈಶಿಗಳು ಉಪಸ್ಥಿತರಿದ್ದರು. ನೆರೆದಂಹ ಸರ್ವರ ಸಮ್ಮುಖದಲ್ಲಿ ವಿದಾಯ ಸಮಾರಂಭವು ಬಹಳ ಅರ್ಥ ಪೂರ್ಣವಾಗಿ ನಡೆಯಿತು.